rti-banner
vc-t

ಮಾಹಿತಿ ಹಕ್ಕು ಅಧಿನಿಯಮ

 

vct-b

ಮಾಹಿತಿ ಹಕ್ಕು 4(1)(ಎ)

download

ಮಾಹಿತಿ ಹಕ್ಕು 4(1)(ಬಿ)

download

ಮಾಹಿತಿ ಹಕ್ಕು 26(3)(ಬಿ)

download

ಮಾಹಿತಿ ಹಕ್ಕು 5(1), 5(2)(b) ಹಾಗೂ19(1)

download
vc-t

ಕಂಪನಿಯ ಸಂಕ್ಷಿಪ್ತ ಪಕ್ಷಿನೋಟ

vct-b

1937 ರಲ್ಲಿ ಕಾರ್ಖಾನೆಯನ್ನು ಅಂದಿನ ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ನಾಲ್ವಡಿ  ಕೃಷ್ಣರಾಜ ಒಡೆಯರ್ ರವರು “ಮೈಸೂರು ಲ್ಯಾಕ್ ಫ್ಯಾಕ್ಟರಿ” ಎಂಬ ನಾಮಾಂಕಿತದಲ್ಲಿ ಸ್ಥಾಪಿಸಿದರು. ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂಬ ಸದಾಶಯದೊಂದಿಗೆ ಅಂದು ಅರಣ್ಯದಲ್ಲಿ ಹೇರಳವಾಗಿ ಸಿಗುತ್ತಿದ್ದ ‘ಅಂಟು ’ ಎಂಬ ಕಚ್ಚಾಸಾಮಗ್ರಿಯಿಂದ ‘ಸೀಲಿಂಗ್ ವ್ಯಾಕ್ಸ್ ’ ತಯಾರಿಸಿ ಸ್ಥಳೀಯ ಸರ್ಕಾರಿ ಇಲಾಖೆಗಳಿಗೆ, ಖಜಾನೆಗಳಿಗೆ ಸರಬರಾಜು ಮಾಡಲಾಗುತ್ತಿತ್ತು. 1947 ರಲ್ಲಿ ‘ಮೈಸೂರು ಲ್ಯಾಕ್ ಫ್ಯಾಕ್ಟರಿ’ ಯನ್ನು ಸರ್ಕಾರದ ಸ್ವಾಮ್ಯಕ್ಕೆ ಒಳಪಡಿಸಲಾಯಿತು. ಅಂದಿನಿಂದ ಇದರ ನಾಮಾಂಕಿತವನ್ನು “ಮೈಸೂರು ಲ್ಯಾಕ್ ಅಂಡ್ ವರ್ಕ್ಸ್ ಲಿಮಿಟೆಡ್’ ಎಂದು ಮರು ನಾಮಕರಣ ಮಾಡಲಾಯಿತು. ಸಣ್ಣ ಪ್ರಮಾಣದಲ್ಲಿ ಬಣ್ಣದ ಉತ್ಪಾದನೆಯನ್ನು ಆರಂಭಿಸಲಾಯಿತು. ಮುಂದುವರೆದು, ಅರಣ್ಯದಲ್ಲಿ ಸಿಗುತ್ತಿದ್ದ ಅಂಟು (ಲ್ಯಾಕ್) ಎಂಬ ಸಾಮಗ್ರಿಯ ಲಭ್ಯತೆ ಕಡಿಮೆಯಾದ್ದರಿಂದ ಮತ್ತು ಸೀಲಿಂಗ್ ವ್ಯಾಕ್ಸ್ ಎಂಬ ಉತ್ಪನ್ನಕ್ಕೆ ಬೇಡಿಕೆ ಕಡಿಮೆಯಾಗಿ, ವಾರ್ನಿಷ್ ಉತ್ಪಾದನೆಯ ಕಡೆ ಕಂಪನಿಯು ತೊಡಗಿಸಿಕೊಂಡ ಪ್ರಯುಕ್ತ 1989 ರಲ್ಲಿ ಕಂಪನಿಯ ಹೆಸರನ್ನು “ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್” ಎಂದು ಮತ್ತೆ ಮರು ನಾಮಕರಣ ಮಾಡಲಾಯಿತು.

ಕರ್ನಾಟಕ ಸರ್ಕಾರವು ನಮ್ಮ ಕಂಪನಿಯಲ್ಲಿ ಶೇ 91.39ರಷ್ಟು ಈಕ್ವಿಟಿ ಬಂಡವಾಳವನ್ನು ತೊಡಗಿಸಿದ್ದು, ಉಳಿಕೆ ಬಂಡವಾಳವನ್ನು ಸಾರ್ವಜನಿಕರು ತೊಡಗಿಸಿರುತ್ತಾರೆ.

ಕಂಪನಿಯು 1962 ರಿಂದ ದೇಶದ ಎಲ್ಲಾ ಸಾರ್ವತ್ರಿಕ ಚುನಾವಣೆಗಳಿಗೆ ಅಳಿಸಲಾಗದ ಶಾಯಿಯನ್ನು ಸರಬರಾಜು ಮಾಡಲು ಆರಂಭಿಸಿತು. ಭಾರತದ ಚುನಾವಣಾ ಆಯೋಗ (ಇ.ಸಿ.ಐ) ನ್ಯಾಷನಲ್ ರಿಸರ್ಚ್ ಡೆವಲಪ್‍ಮೆಂಟ್ ಕಾರ್ಪೋರೇಷನ್ (ಎನ್.ಆರ್.ಡಿ.ಸಿ) ಹಾಗೂ ನ್ಯಾಷನಲ್ ಫಿಜಿಕಲ್ ಲ್ಯಾಬೋರೇಟರಿ (ಎನ್.ಪಿ.ಎಲ್) ಇವರ ಸಹಯೋಗದೊಡನೆ ಅಳಿಸಲಾಗದ ಶಾಯಿಯನ್ನು ದೇಶದ್ಯಾಂತ ಸರಬರಾಜು ಮಾಡಲಾಗುತ್ತಿದ್ದು, ದೇಶದ ಪ್ರಜಾಪ್ರಭುತ್ವದ ಯಶಸ್ಸಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ.

1978-79 ನೇ ಸಾಲಿನಲ್ಲಿ ಅಳಿಸಲಾಗದ ಶಾಯಿಯ ಮೊದಲ ರಫ್ತು ವಹಿವಾಟನ್ನು ಕಂಪನಿಯು ಆರಂಭಿಸಿತು. ಇಲ್ಲಿಯವರೆಗೆ ಪ್ರಪಂಚದ ಇಪ್ಪತ್ತೆಂಟು ರಾಷ್ಟ್ರಗಳಿಗೂ ಹೆಚ್ಚು ನಮ್ಮ ಉತ್ಪನ್ನ ಬಳಕೆಯಾಗುತ್ತಿರುವುದು ಹೆಮ್ಮೆಯ ವಿಷಯ. ಆ ಮೂಲಕ ರಾಷ್ಟ್ರಕ್ಕೆ ಹೆಚ್ಚಿನ ವಿದೇಶಿ ವಿನಿಮಯ ಹರಿದು ಬರಲು ಕಂಪನಿಯೂ ಭಾಗಿಯಾಗಿರುವುದು ಸಂತಸದ ವಿಚಾರವಾಗಿದೆ.

 

vc-t

ಮೂಲಸೌಕರ್ಯ

vct-b

ಕಂಪನಿಯಲ್ಲಿ ಮಾರ್ಕೆಟಿಂಗ್, ಹಣಕಾಸು, ಖರೀದಿ, ಗುಣನಿಯಂತ್ರಣ, ಉತ್ಪಾದನೆ ಮತ್ತು ಮಾನವ ಸಂಪನ್ಮೂಲ ಎಂಬ ಒಟ್ಟು ಆರು ವಿಭಾಗಗಳಿದ್ದು, ಪ್ರತಿ ವಿಭಾಗವೂ ವೃತ್ತಿನಿರತ ಮತ್ತು ಅನುಭವಿ ವ್ಯವಸ್ಥಾಪಕರುಗಳ ಮೇಲುಸ್ತುವಾರಿಯನ್ನು ಹೊಂದಿದೆ.

ಕಂಪನಿಯು ಒಟ್ಟು 7 ಎಕರೆಯಷ್ಟು ಭೂಮಿಯನ್ನು ಹೊಂದಿದ್ದು, ಅದರ ಪೈಕಿ 4.5 ಎಕರೆಯಲ್ಲಿ ಕಟ್ಟಡದ ನಿರ್ಮಾಣವಾಗಿರುತ್ತದೆ.

ಕಂಪನಿಯು ಉತ್ತಮ ಹಣಕಾಸು ಸೌಲಭ್ಯ ಮತ್ತು ಚರಾಸ್ತಿಗಳನ್ನು ಒಳಗೊಂಡಿದ್ದು, ಸಾಲರಹಿತ ಮತ್ತು ಋಣಮುಕ್ತ ಕಂಪನಿಯಾಗಿದೆ.

ಕಂಪನಿಯು ಉತ್ತಮ, ಸುಸಜ್ಜಿತ ಸಂಶೋಧನೆ ಮತ್ತು ಗುಣನಿಯಂತ್ರಣ ಪ್ರಯೋಗಶಾಲೆಯನ್ನು ಒಳಗೊಂಡಿದ್ದು, ಎಲ್ಲಾ ಉತ್ಪಾದನಾ ಪೂರ್ವ ಮತ್ತು ನಂತರದ ಚಟುವಟಿಕೆಗಳನ್ನು ಪ್ರಯೋಗಕ್ಕೆ ಒಳಪಡಿಸುವ ಕ್ರಿಯೆಯನ್ನು ಒಳಗೊಂಡಿದೆ.

ಕಂಪನಿಯು ಗ್ರಾಹಕರಿಗೆ ಬೇಕಾದ ಸೇವೆಯನ್ನು ಒದಗಿಸಲು ಸುಸಜ್ಜಿತ ಯಂತ್ರೋಪಕರಣಗಳನ್ನು ಒಳಗೊಂಡಿದೆ.

ಕಂಪನಿಯು  ISO 9001/2015 ಮತ್ತು ISO 14001/2015 ಪ್ರಮಾಣೀಕೃತ ಕಂಪನಿಯಾಗಿದೆ.

ಕಂಪನಿಯು ತನ್ನದೇ ಆದ ಗುಣಮಟ್ಟದ ನೀತಿಯನ್ನು ಅಳವಡಿಸಿಕೊಂಡಿದ್ದು ಈ ಸಂಬಂಧ ಪ್ರತ್ಯೇಕ ‘Vision/Mission’  ನೀತಿಯನ್ನು ಸಹಾ ಅಳವಡಿಸಿಕೊಂಡಿದೆ.

ಕಂಪನಿಯಲ್ಲಿ ಉತ್ತಮ ಶೈಕ್ಷಣಿಕ ಹಿನ್ನೆಲೆಯುಳ್ಳ ವೃತ್ತಿಪರರು ಮತ್ತು ಕುಶಲ ಮಾನವ ಸಂಪನ್ಮೂಲವಿದ್ದು, ಉತ್ಪಾದನೆ ಮತ್ತು ಸರಕುಗಳ ಸಾಗಾಣಿಕೆಗೆ ಬೇಕಾದ ಕೌಶಲ್ಯವನ್ನು  ಹೊಂದಿರುತ್ತಾರೆ.

vc-t

ಆಡಳಿತ ಮಂಡಳಿ ನಿರ್ದೇಶಕರುಗಳು

vct-b

ಅಧ್ಯಕ್ಷರು
ಶ್ರೀ ಗೌರವ್ ಗುಪ್ತ, ಭಾ. ಆ .ಸೇ.
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ಕರ್ನಾಟಕ ಸರ್ಕಾರ
ವಿಕಾಸಸೌಧ, ಬೆಂಗಳೂರು-560 001.

ಡಾ. ಚಂದ್ರಶೇಖರ ದೊಡ್ಡಮನಿ
ವ್ಯವಸ್ಥಾಪಕ ನಿರ್ದೇಶಕರು

ನಿರ್ದೇಶಕರು

ಶ್ರೀಮತಿ ಎನ್.ಆರ್. ಜಗನ್ಮಾತ
ವಿಶೇಷ  ಕಾರ್ಯದರ್ಶಿಗಳು, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ,
ವಿಕಾಸಸೌಧ, ಬೆಂಗಳೂರು-560 001.

vc-t

ಕಂಪನಿಗೆ  ಸಂದ ಗೌರವಗಳು

vct-b

ಕರ್ನಾಟಕ ಸರ್ಕಾರದ ವಿಶ್ವೇಶ್ವರಯ್ಯ ಇಂಡಸ್ಟ್ರೀಯಲ್ ಟ್ರೇಡ್ ಸೆಂಟರ್ ಸಂಸ್ಥೆಯು ರಫ್ತು ಸಾಧನೆಯನ್ನು ಗಮನಿಸಿ 1996- 2000 ನೇ ಸಾಲಿಗೆ Best Exporter” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಕರ್ನಾಟಕ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆಯವರು ಉತ್ತಮ ತೆರಿಗೆ ಪಾವತಿದಾರರು ಎಂಬ ಪ್ರಶಸ್ತಿ ನೀಡಿ ಕಂಪನಿಯನ್ನು ಗೌರವಿಸಿರುತ್ತಾರೆ.

2009-10 ನೇ ಸಾಲಿಗೆ ಕೇಂದ್ರ ಸರ್ಕಾರದ ಅಬ್ಕಾರಿ, ಸೀಮಾ ಮತ್ತು ಸೇವಾ ಶುಲ್ಕ ಇಲಾಖೆಯವರು ಕಂಪನಿಯನ್ನು  “ಉತ್ತಮ ಕೇಂದ್ರಅಬ್ಕಾರಿ ಶುಲ್ಕ ಪಾವತಿದಾರ” ಎಂಬ ಪ್ರಶಸ್ತಿ ನೀಡಿ ಗೌರವಿಸಿರುತ್ತಾರೆ.

2010-11 ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರವು “ಮಾನ್ಯ ಮುಖ್ಯಮಂತ್ರಿಗಳ ವಾರ್ಷಿಕ ರತ್ನ” ಪ್ರಶಸ್ತಿಯನ್ನು ಕಂಪನಿಗೆ ನೀಡಿ ಗೌರವಿಸಿದ್ದು, 2015-16 ನೇ ಸಾಲಿಗೆ ಏರಡನೇ ಬಾರಿ “ಮಾನ್ಯ ಮುಖ್ಯಮಂತ್ರಿಗಳ ವಾರ್ಷಿಕ ರತ್ನ” ಪ್ರಶಸ್ತಿ ಲಭಿಸಿರುತ್ತದೆ

vc-t

ವಿಶೇಷ ಸಾಧನೆಗಳು

 

ಆಟೋಮೋಟಿವ್ ಕ್ಷೇತ್ರಕ್ಕೆ ಬೇಕಾದ 2ಕೆ ಪೇಯಿಂಟ್ಸ್ ಮತ್ತು ಇಂಡೆಲಿಬಲ್ ಇಂಕ್ ಮಾರ್ಕರ್ ಪೆನ್ ಅಭಿವೃದ್ದಿಪಡಿಸಲಾಗಿದೆ.

ಕಂಪನಿಯು ” ಇಂಡೆಲಿಬಲ್ ಮಾರ್ಕರ್ ಪೆನ್” ಎಂಬ ನೂತನ ಉತ್ಪನವನ್ನು ಪರಿಚಯಿಸುತ್ತಿದ್ದು, ಅಂತಿಮ ಹಂತದ ಪ್ರಮಾಣೀಕರಣಕ್ಕಾಗಿ ನ್ಯಾಷನಲ್  ಕೆಮಿಕಲ್ ಲ್ಯಾಬೋರೇಟರಿ, ಪೂಣೆ, ಇವರಿಗೆ ಕಳುಹಿಸಿಕೊಡಲಾಗಿದೆ.

ರಾಜ್ಯ ಸಭೆ, ವಿಧಾನಪರಿಷತ್ತಿನ (ಮೇಲ್ಮನೆ) ಚುನಾವಣೆಗಳಿಗೆ ಬೇಕಾದ “Marker Sketch  Pen” ಗಳನ್ನು ಕಂಪನಿಯುಅಭಿವೃದ್ಧಿ ಪಡಿಸಿ ಚುನಾವಣಾಆಯೋಗಕ್ಕೆ ಸರಬರಾಜು ಮಾಡಿದೆ.  ಪ್ರಸ್ತುತ ಸಾಲಿನಲ್ಲಿ ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಮಣಿಪುರ ಇತ್ಯಾದಿ ರಾಜ್ಯಗಳ ಮೇಲ್ಮನೆ ಚುನಾವಣೆಗಳಿಗೆ ಸರಬರಾಜು ಮಾಡಲಾಗಿದೆ.

ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿಗಳ ಚುನಾವಣೆ -2017 ಕ್ಕೆ “Marker Sketch Pen” ಅಭಿವೃದ್ದಿಪಡಿಸಿ ಚುನಾವಣಾ ಆಯೋಗಕ್ಕೆ ಸರಬರಾಜು ಮಾಡಲಾಗಿದೆ.

vc-t

ಕಾರ್ಯಯೋಜನೆಗಳು

 

ಕಂಪನಿಯ ಉತ್ಪನ್ನಗಳಿಗೆ “ಐ.ಎಸ್.ಐ” ಮುದ್ರೆ ಪಡೆಯುವುದು.

ಭಾರತೀಯ ರೈಲ್ವೆ ಇಲಾಖೆ “Research, Design and Scientific Organization” ಸಂಸ್ಥೆಯ ಪ್ರಮಾಣಪತ್ರವನ್ನು  ಕಂಪನಿಯ ಉತ್ಪನ್ನಗಳಿಗೆ ಪಡೆಯುವುದು.

ನವದೆಹಲಿಯು “ASRTU (Association of State Road Transport Undertakings) ” ಸಂಸ್ಥೆಯಲ್ಲಿ ಕಂಪನಿಯ ಹೆಸರನ್ನು ನೊಂದಾಯಿಸಲು ಕ್ರಮ ವಹಿಸುವ ಬಗ್ಗೆ.

ಕಂಪನಿಯ ಉತ್ಪಾದನಾ ಘಟಕದ ಉನ್ನತೀಕರಣ ಮತ್ತು ಆಧುನೀಕರಣಗೊಳಿಸುವುದು.

vc-t

ಕಂಪನಿಯ ಪ್ರಗತಿಯ ವರದಿ

vct-b

ಕಂಪನಿಯು 2016-17 ನೇ ಸಾಲಿನಲ್ಲಿ ಈ ಕೆಳಕಂಡಂತೆ ದೇಶೀಯ ಮತ್ತು ರಫ್ತು ವಹಿವಾಟು ನಡೆಸಿರುತ್ತದೆ.

2016-17
 ಉತ್ಪನ್ನಗಳು  ದೇಶೀಯ ವಹಿವಾಟು  ರಫ್ತು ವಹಿವಾಟು   ಒಟ್ಟು
 ಅಳಿಸಲಾಗದ ಶಾಯಿ (ಇಂಡೆಲಿಬಲ್ ಇಂಕ್)  1,648.43   85.80  1,734.23
ಪೇಯಿಂಟ್ಸ್  1,116.67  –  1,116.67
 ಒಟ್ಟು  2,765.10  85.80 2 ,850.90

2016-17 ನೇ ಸಾಲಿನಲ್ಲಿಕಂಪನಿಯು ಹಿಂದಿನ ವರ್ಷಗಳಿಗೆ ಹೋಲಿಸಿದಾಗ ಪೇಯಿಂಟ್ಸ್ ಕ್ಷೇತ್ರದಲ್ಲಿ ರೂ.388.51 ಲಕ್ಷಗಳಷ್ಟು ಹೆಚ್ಚುವರಿ ವಹಿವಾಟು ನಡೆಸಿರುತ್ತದೆ.

ಕಳೆದ ಐದು ವರ್ಷಗಳಲ್ಲಿ ಕಂಪನಿಯು ನಡೆಸಿರುವ ವಹಿವಾಟು ವಿವರಗಳು:
(ರೂ. ಲಕ್ಷಗಳಲ್ಲಿ)

ವರ್ಷ  ವಹಿವಾಟು  ಪಯಿಂಟ್ಸ್ ಅಳಿಸಲಾಗದ ಶಾಯಿ ಲಾಭಾಂಶ
2012-13 1,892.65 623.21 1,269.44 222.95
2013-14 4,735.68 543.42 4,192.26 1,334.38
2014-15 2,575.14 570.30 2,004.84 665.50
2015-16 3,820.43 728.16 3,092.27 1,250.36
2016-17 2,850.90 1116.66 1,734.24 635.58

ಕಳೆದ ಐದು ವರ್ಷಗಳಲ್ಲಿ ಸರ್ಕಾರಕ್ಕೆ ಸಲ್ಲಿಸಿರುವ ಡಿವಿಡೆಂಡ್ (ಲಾಭಾಂಶ) ವಿವರ

(ರೂ. ಲಕ್ಷಗಳಲ್ಲಿ)

ವರ್ಷ ಲಾಭಾಂಶ ಸಲ್ಲಿಕೆ ಶೇಕಡವಾರು
2012-13 23.68   25%
2013-14 52.10   55%
2014-15 23.68   25%
2015-16 23.68   25%
2016-17 23.68   25%
vc-t

ಹಾಲಿ ಉತ್ಪನ್ನಗಳು

vct-b

ಸಿಂಥಟಿಕ್ ಎನಾಮೆಲ್,
ಪಾಲಿಯೂರಿಥೀನ್ ಪೇಯಿಂಟ್ಸ್, ಪ್ರೈಮರ್ಸ್,
ಥಿನ್ನರ್ಸ್, ಸೀಲಿಂಗ್ ವ್ಯಾಕ್ಸ್,
ಸ್ಟಿಫ್ ಪೇಸ್ಟ್,
ಅಳಿಸಲಾಗದ ಶಾಯಿ,
ಅಳಿಸಲಾಗದ ಶಾಯಿ ಮಾರ್ಕರ್ ಪೆನ್ ಇತ್ಯಾದಿಗಳು .

vc-t

ವಿಳಾಸ

vct-b

ಆಡಳಿತ ಕಛೇರಿ ಮತ್ತು ಕಾರ್ಖಾನೆ

ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್
(ಕರ್ನಾಟಕ ಸರ್ಕಾರದ ಒಂದು ಉದ್ಯಮ)
 
ಹೊಸ ಬನ್ನಿಮಂಟಪ ಬಡಾವಣೆ, ಮೈಸೂರು – 570015
+91-821-2493831 / 2497469 / 2492396
+91-821-2499466
 info@mysorepaints.com
CIN: U51434KA1947SGC0000503

ಮಾರಾಟ ಮಳಿಗೆಗಳು

ಮೈಸೂರು
ನಂ. 21, ಧನ್ವಂತರಿ ರಸ್ತೆ,
ಮೈಸೂರು-570001
ದೂರವಾಣಿ: 0821-2429138

ಮಧುರೈ
ನಂ. 69 (ಮಹಡಿ)
ಸೌತ್‍ಮಾಸಿ ಸ್ಟ್ರೀಟ್, ಮಧುರೈ-625001
ದೂರವಾಣಿ: 0452-2744671

ಪ್ರಾದೇಶಿಕ ಕಛೇರಿ

ಬೆಂಗಳೂರು
ಮೈಷುಗರ್ ಬಿಲ್ಡಿಂಗ್, ಮೊದಲನೇ ಮಹಡಿ
ಜೆ.ಸಿ. ರೋಡ್, ಬೆಂಗಳೂರು-560002

Contact Us

We're not around right now. But you can send us an email and we'll get back to you, asap.

Not readable? Change text.